ಅಕ್ಷರ ಫೌಂಡೇಷನ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ)ಅಕ್ಷರ ಫೌಂಡೇಷನ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ)ಅಕ್ಷರ ಫೌಂಡೇಷನ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ)
+91 97408 40973 | 78927 88199
ಕೊಳ್ಳೆಗಾಲ

Our Services

ಅಕ್ಷರ ಫೌಂಡೇಷನ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ)

ನಮ್ಮ ಸೇವೆಗಳು

ನಮ್ಮ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕರ್ನಾಟಕದ ಯುವ ಜನತೆಗೆ ಸಾಮಾಜಿಕ ಶೈಕ್ಷಣಿಕ ಮತ್ತು ವೃತ್ತಿ ಜೀವನದ ಬೆಳವಣಿಗೆಗೆ ಅಗತ್ಯವಾದ ವಿವಿಧ ರೀತಿಯ ಸೇವೆಗಳನ್ನು ಒದಗಿಸುವಲ್ಲಿ ಬದ್ಧವಾಗಿದೆ. ನಮ್ಮ ಪ್ರತಿಯೊಂದು ಸೇವೆಯು ಎಲ್ಲಾ ವರ್ಗದ, ಎಲ್ಲಾ ಪ್ರದೇಶದ ಯುವ ಜನತೆಗೆ ಕೌಶಲ್ಯ ಆತ್ಮವಿಶ್ವಾಸ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ನಮ್ಮ ಸೇವೆಗಳು ಯುವಕರನ್ನು ಉದ್ಯೋಗಕ್ಕೆ ಸಿದ್ಧಗೊಳಿಸುವುದಲ್ಲದೆ, ಸಮಾಜದ ಆರೋಗ್ಯಕರ ಮತ್ತು ಜಾಗೃತ ಅಭಿವೃದ್ಧಿಗೆ ಸಹ ಸಹಕಾರಿಯಾಗಿವೆ.

ನಮ್ಮ ಸೇವೆಗಳು

ಉದ್ಯೋಗ ಮೇಳಗಳು

ಕರ್ನಾಟಕದ ಯುವಜನತೆಗೆ ನೇರವಾಗಿ ಉದ್ಯೋಗ ಅವಕಾಶಗಳನ್ನು ತಲುಪಿಸುವುದು ಅಕ್ಷರ ಫೌಂಡೇಶನ್ ಗ್ರಾಮೀಣಾಭಿರುದ್ದಿ ಸಂಸ್ಥೆಯ ಪ್ರಮುಖ ಗುರಿಯಾಗಿದೆ.

ಯಾವುದು ನಮ್ಮ ಗುರಿ?

ಗ್ರಾಮೀಣ ಹಾಗೂ ನಗರ ಯುವಕರಿಗೆ ಉದ್ಯೋಗದ ಅಂತರವನ್ನು ಕಡಿಮೆ ಮಾಡುವುದು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಹುಡುಕಿಸಲು ಸಹಾಯ ಮಾಡುವುದು.

ಉದ್ಯೋಗ ಮೇಳಗಳು

ನಮ್ಮ ಉದ್ಯೋಗ ಮೇಳಗಳ ವಿಶೇಷತೆಗಳು

  • ಸ್ಥಳೀಯ ಮತ್ತು ರಾಜ್ಯದ ವಿವಿಧ ಜಿಲ್ಲೆಯ ಖಾಸಗಿ ಕಂಪನಿಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು ಭಾಗವಹಿಸುವಿಕೆ.
  • 7ನೇ ತರಗತಿ ಯಿಂದ 10, PUC, ITI, DIPLOMA, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಪದವಿ, ನರ್ಸಿಂಗ್, ಅಂಗವಿಕಲ ಅಭ್ಯರ್ಥಿಗಳು.
  • ತಾಂತ್ರಿಕ ಮತ್ತು ತಾಂತ್ರಿಕೇತರ (Technical and Non-Technical),
  • ನೇರ ಸಂದರ್ಶನ ಹಾಗೂ ಸ್ಥಳದಲ್ಲಿಯೇ ಆಯ್ಕೆ ಪತ್ರದ ವಿತರಣೆ.
  • ರೆಸೂಮ್ / ಬಯೋ ಡಾಟಾ ಬಗ್ಗೆ ಮಾರ್ಗದರ್ಶನ.
  • ವೃತ್ತಿ ಪರ ಸಲಹೆಗಳು (Career Counselling) 
ನಮ್ಮ ಸೇವೆಗಳು

ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಶಿಬಿರಗಳು

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ವಿದ್ಯಾಹರ್ಹತೆ ಮಾತ್ರ ಸಾಕಾಗುವುದಿಲ್ಲ ಇದರ ಜೊತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಬಹಳ ಅಗತ್ಯವಿದೆ, ಆದ್ದರಿಂದ ಅಕ್ಷರ ಫೌಂಡೇಶನ್ ಗ್ರಾಮೀಣಾಭಿರುದ್ದಿ ಸಂಸ್ಥೆ ಮತ್ತು ಕನ್ನಡ ನೌಕರಿಯು ವೃತ್ತಿಪರ ಕೌಶಲ್ಯತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ.

ಕೌಶಲ್ಯ ತರಬೇತಿ ಶಿಬಿರಗಳು

ತರಬೇತಿ ನೀಡುವ ಕ್ಷೇತ್ರಗಳು

  • ಕಂಪ್ಯೂಟರ್ ತರಬೇತಿ ತರಗತಿಗಳು.
  • ಸಂವಹನ ಕೌಶಲ್ಯ ( Communication skills ).
  • ಗ್ರಾಹಕ ಸೇವೆಗಳು (Customer services).
  • ತಾಂತ್ರಿಕ ಕೌಶಲ್ಯಗಳು (Technical Skills ).
  • ರೆಸೂಮ್ / ಬಯೋಡೇಟಾ ತಯಾರಿ (How to build Resume).
  • ಸೂಕ್ಷ್ಮ ಕೌಶಲ್ಯ ತರಬೇತಿಗಳು (Soft skills training).
  • ಸಂದರ್ಶನ ಕೌಶಲ್ಯ (interview skill).
  • ಸೇಲ್ಸ್ ಮತ್ತು ಮಾರುಕಟ್ಟೆಯ ಅಭಿರುದ್ದಿಯ ತರಬೇತಿಗಳು (Sales and Marketing skill development training).

ತರಬೇತಿಯ ಲಾಭಗಳು

  • ಉದ್ಯೋಗಕ್ಕೆ ಬೇಕಾದಂತಹ ಪ್ರಾಯೋಗಿಕ ಕೌಶಲಗಳು.
  • ಉಚಿತ ತರಬೇತಿ ತರಗತಿಗಳು.
  • ತರಬೇತಿ ಪಡೆದ ಪ್ರಮಾಣ ಪತ್ರಗಳು (Certificate’s).
  • ತರಬೇತಿ ನಂತರ ನೇಮಕಾತಿಗಾಗಿ ಸಹಾಯ ಪಡೆಯುವುದು.
ನಮ್ಮ ಸೇವೆಗಳು

ವ್ಯಕ್ತಿತ್ವ ವಿಕಸನ ಶಿಬಿರಗಳು

ವೈಯಕ್ತಿಕ ಬೆಳವಣಿಗೆಯೇ ವೃತ್ತಿಜೀವನದ ಬುನಾದಿ. ಇಂದಿನ ಯುವಕರಿಗೆ ಆತ್ಮವಿಶ್ವಾಸ, ಸಂವಹನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ವ್ಯಕ್ತಿತ್ವ ವಿಕಸನ ಶಿಬಿರಗಳು ಅತ್ಯಗತ್ಯ.

ಯಾರಿಗಾಗಿ?

ವಿದ್ಯಾರ್ಥಿಗಳು, ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು, ವೃತ್ತಿ ಜೀವನವನ್ನು ಆರಂಭಿಸುತ್ತಿರುವ ಯುವಕ – ಯುವತಿಯರು.

ವ್ಯಕ್ತಿತ್ವ ವಿಕಸನ ಶಿಬಿರಗಳು

ಈ ಶಿಬಿರಗಳಲ್ಲಿ ಒಳಗೊಂಡಿರುವ ವಿಷಯಗಳು

  • ಆತ್ಮವಿಶ್ವಾಸ ನಿರ್ಮಾಣ
  • ಸಾರ್ವಜನಿಕ ಭಾಷಣ ಕೌಶಲ್ಯ
  • ಗುರಿ ನಿಗದಿ ಮತ್ತು ಸಮಯ ನಿರ್ವಹಣೆ
  • ಶಿಷ್ಟಾಚಾರ ಮತ್ತು ವೃತ್ತಿ ಪ್ರವೃತ್ತಿ
  • ತಂಡದೊಂದಿಗೆ ಕೆಲಸ ಮಾಡುವ ಕೌಶಲ್ಯ
  • Interview facing techniques
  • Leadership skills
ನಮ್ಮ ಸೇವೆಗಳು

CAMPUS INTERVIEW

ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉದ್ಯೋಗಗಳನ್ನು ಕಲ್ಪಿಸಿ ಕೊಡುವುದರ ಸಲುವಾಗಿ ಸ್ಥಳೀಯ ಖಾಸಗಿ ಕಂಪನಿಗಳ ಸಹಕಾರದೊಂದಿಗೆ ಕ್ಯಾಂಪಸ್ ಸಂದರ್ಶನಗಳನ್ನು ಆಯೋಜಿಸುತ್ತದೆ. ಕಂಪನಿಗಳ ಮಾನವ ಸಂಪನ್ಮೂಲ ಮುಖ್ಯಸ್ಥರು / ಉದ್ಯೋಗದಾತರನ್ನು ಕರೆಸಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ನೇರ ಅವಕಾಶಗಳನ್ನು ಒದಗಿಸುವುದು.

ಕ್ಯಾಂಪಸ್ ಸಂದರ್ಶನಗಳು

CAMPUS INTERVIEW BENEFITS:

  • ಬಹುರಾಷ್ಟ್ರೀಯ ಕಂಪನಿಗಳು, ಆರಂಭಿಕ ಉದ್ಯಮ (Startup Companies), ಸ್ಥಳೀಯ ಕಂಪನಿಗಳ ಪಾಲ್ಗೊಳ್ಳುವಿಕೆ.
  • ತಾಂತ್ರಿಕ ಮತ್ತು ತಾಂತ್ರಿಕೇತರ (Technical and Non Technical) ಉದ್ಯೋಗವಕಾಶಗಳು.
  • ಎಲ್ಲಾ ತರಹದ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಡುವುದು.
  • ಸ್ಥಳದಲ್ಲಿಯೇ ಸಂದರ್ಶನ ಮತ್ತು ಆಯ್ಕೆ.
  • ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನೆ (Career guidance and Counselling).

ಲಾಭಗಳು

  • ಉದ್ಯೋಗಾಕಾಂಕ್ಷಿಗಳಿಗೆ ನೇರ ಉದ್ಯೋಗ.
  • ಕಾಲೇಜಿನಲ್ಲಿ ಪ್ಲೇಸ್ಮೆಂಟ್ ರೆಕಾರ್ಡ್ ಅಭಿರುದ್ದಿ.
  • ಉದ್ಯೋಗಕ್ಕೆ ಬೇಕಾದ ಕೌಶಲವನ್ನು ಬೆಳೆಸುವ ಮಾರ್ಗದರ್ಶನ.
ನಮ್ಮ ಸೇವೆಗಳು

ಆರೋಗ್ಯ ಮೇಳಗಳು

ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಮರ್ಪಿತರಾಗಿರುವ ಅಕ್ಷರ ಫೌಂಡೇಶನ್, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮೇಳಗಳನ್ನು ಆಯೋಜಿಸುವ ಮೂಲಕ ಸಾವಿರಾರು ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.

ಗುರಿ

ಆರೋಗ್ಯ ಸೇವೆಗಳಿಂದ ದೂರವಿರುವ ಜನರಿಗೆ ಆರೋಗ್ಯ ಜಾಗೃತಿ ಮತ್ತು ಪ್ರಾಥಮಿಕ ಚಿಕಿತ್ಸೆ ತಲುಪಿಸುವುದು.

ಆರೋಗ್ಯ ಮೇಳಗಳು

ಆರೋಗ್ಯ ಮೇಳಗಳಲ್ಲಿ ದೊರೆಯುವ ಸೇವೆಗಳು

  • ಸಾಮಾನ್ಯ ಆರೋಗ್ಯ ತಪಾಸಣೆ.
  • ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ.
  • ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ.
  • ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಸಲಹೆ.
  • ಮಕ್ಕಳ ಮತ್ತು ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮತ್ತು ಸಲಹೆ.
  • ವೈದ್ಯಕೀಯ ಸಲಹೆ ಮತ್ತು ಜಾಗೃತಿ ಕಾರ್ಯಕ್ರಮಗಳು
ನಮ್ಮ ಸೇವೆಗಳು

ರಕ್ತದಾನ ಶಿಬಿರಗಳು

ರಕ್ತದಾನವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು, ಗಾಯಗೊಂಡವರಿಗೆ ಸಹಾಯ ಮಾಡಲು ಮತ್ತು ಶಸ್ತ್ರಚಿಕಿತ್ಸೆಗಳಿಗೆ ಅವಶ್ಯಕವಾದ ರಕ್ತವನ್ನು ಪೂರೈಸಲು ಅತ್ಯಗತ್ಯ.
“ಒಬ್ಬ ರಕ್ತದಾನಿ ಮೂರು ಜೀವಗಳನ್ನು ಉಳಿಸಬಹುದು” ಎಂಬ ಸಿದ್ಧಾಂತದೊಂದಿಗೆ ನಮ್ಮ ಸಂಸ್ಥೆಯು ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ.

ನಮ್ಮ ನಂಬಿಕೆ ಮತ್ತು ರಕ್ತದಾನದ ಮಹತ್ವ ಹಾಗೂ ಜೀವಗಳನ್ನು ಉಳಿಸುತ್ತದೆ: ರಕ್ತದಾನವು ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಮತ್ತು ಕಾಯಿಲೆಗಳಿಂದಾಗಿ ರಕ್ತದ ಕೊರತೆ ಇರುವವರಿಗೆ ಜೀವನದ ಉಡುಗೊರೆಯನ್ನು ನೀಡುತ್ತದೆ

ರಕ್ತದಾನಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು :
1. ಭಾರತದಲ್ಲಿ ಪ್ರತಿ ವರ್ಷ ಸುಮಾರು 5 ಕೋಟಿ ಯೂನಿಟ್ ರಕ್ತದ ಅಗತ್ಯವಿದೆ, ಆದರೆ ಕೇವಲ 2.5 ಕೋಟಿ ಮಾತ್ರ ಲಭ್ಯವಿದೆ.
2. ಪ್ರತಿ ಎರಡು ಸೆಕೆಂಡಿಗೆ ಒಮ್ಮೆ ರಕ್ತದ ಅವಶ್ಯಕತೆ ಇರುತ್ತದೆ, ಮತ್ತು ದಿನಕ್ಕೆ ಕನಿಷ್ಠ 38,000 ಯೂನಿಟ್ ರಕ್ತದ ಅಗತ್ಯವಿದೆ.
3. ಒಂದು ಕಾರ್ ಅಪಘಾತದಲ್ಲಿ ಕನಿಷ್ಠ 100 ಯೂನಿಟ್ ರಕ್ತದ ಅಗತ್ಯವಿದೆ.
4. ಪ್ರತಿ 56 ದಿನಗಳಿಗೊಮ್ಮೆ ಆರೋಗ್ಯವಂತ ದಾನಿಗಳು ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಹುದು

ರಕ್ತದಾನ ಶಿಬಿರಗಳು

ಶಿಬಿರಗಳ ಪ್ರಮುಖ ಅಂಶಗಳು

  • ವೈದ್ಯಕೀಯ ತಂಡದ ಮೇಲ್ವಿಚಾರಣೆ
  • ಸುರಕ್ಷಿತ ಹಾಗೂ ಪ್ರಮಾಣಿತ ರಕ್ತದಾನ ಪ್ರಕ್ರಿಯೆ
  • ರಕ್ತದಾನಿ ಪ್ರಮಾಣಪತ್ರ
  • ತುರ್ತು ಪರಿಸ್ಥಿತಿಯಲ್ಲಿ ರಕ್ತ ಲಭ್ಯತೆಗಾಗಿ ಸಹಕಾರ
Cart
Call Now Button