ನಮ್ಮ ಬಗ್ಗೆ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡಿಗರಿಗೆ (ನಿರುದ್ಯೋಗಿ ಯುವಜನತೆಗೆ) ಉದ್ಯೋಗದ ಮಾಹಿತಿಯನ್ನು ತಲುಪಿಸುವ ಸಲುವಾಗಿ ಈ ವೆಬ್ ಸೈಟ್ ಅನ್ನು ಮಾಡಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುವಂತಾಗಲಿ ಎಂಬುದು ನಮ್ಮ ಕನಸು ಮತ್ತು ಆಶಯ.
ಉದ್ಯೋಗ ಮೇಳ ಆಯೋಜಕನಿಗೆ ಜನದನಿ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರ ಪರಿಚಯ
ಶ್ರೀಯುತ ಕುಮಾರ್ ಉಪ್ಪಾರವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಾರಂಗಿ ಗ್ರಾಮದಲ್ಲಿ ಜನಿಸಿ ಹಳ್ಳಿಯ ಬಡತನದ ಬೇಗೆಯ ನಡುವೆ ಶಿಕ್ಷಣ ಪಡೆದು, ಬಾಲ್ಯದಿಂದಲೇ ಈ ಸಮಾಜದ ಬಡ ಸಮುದಾಯದ ಉದ್ಧಾರಕ್ಕಾಗಿ ಯಾವುದಾದರೂ ಒಂದು ಮಹತ್ತರ ಸುಧಾರಣೆ ಕೈಗೊಳ್ಳಬೇಕೆಂಬ ಕನಸು ಕಂಡವರು. ಹಲವಾರು ಸಂಕಷ್ಟಗಳ ನಡುವೆ ಸವಾಲ್ ಎಂಬಂತೆ ತಮ್ಮ ಶಿಕ್ಷಣ ಪಡೆದು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಸೇರುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಹಲವಾರು ಸವಾಲುಗಳ ನಡುವೆ ಉತ್ತಮ ಸಮರ್ಪಣ ಮನೋಭಾವ ಹಾಗೂ ಛಲದಿಂದ ಹಂತ ಹಂತವಾಗಿ ಬಡ್ತಿ ಪಡೆಯುತ್ತಾ ಮಾನವ ಸಂಪನ್ಮೂಲ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾ ಇಂದಿನ ಈ ಕೌಶಲ್ಯಾಧಾರಿತ ಸ್ಪರ್ಧಾತ್ಮಕ ಯುಗದಲ್ಲಿ ನಗರ ಪ್ರದೇಶದ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಸಲುವಾಗಿ ಗ್ರಾಮೀಣ ಜನತೆ ಅನುಭವಿಸುತ್ತಿರುವ ಸಂಕಷ್ಟಗಳು ಹಾಗೂ ಪರಿಹಾರವೆಂಬಂತೆ ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿ ಯುವ ಜನತೆಗೆ “ಕ್ಯಾಂಪಸ್ ಟು ಕಾರ್ಪೊರೇಟ್ ಟ್ರೈನಿಂಗ್ ಪ್ರೋಗ್ರಾಮ್” (Campus to corporate Training program) ಅಂದರೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ಶಿಬಿರ ಎಂಬ ಕಾರ್ಯಕ್ರಮದಡಿಯಲ್ಲಿ ಇಡೀ ರಾಜ್ಯಾದ್ಯಂತ ಸುಮಾರು 70,000ಕ್ಕೂ ಅಧಿಕ ಯುವಜನತೆಗೆ ಕೌಶಲ್ಯಾಧಾರಿತ ತರಬೇತಿ ನೀಡುವುದು ಮಾತ್ರವಲ್ಲದೆ ಇದರ ಮುಂದಿನ ಭವಿಷ್ಯಕ್ಕೆ ಔದ್ಯೋಗಿಕ ಬುನಾದಿ ಒದಗಿಸಲು ರಾಜ್ಯದಾದ್ಯಂತ ಹಲವಾರು ಜನಪ್ರತಿನಿಧಿಗಳು ಹಾಗೂ ಸಚಿವರುಗಳು ಸಂಸದರು ಶಾಸಕರು ಮತ್ತು ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು ಐವತ್ತಕ್ಕೂ ಹೆಚ್ಚು ಉದ್ಯೋಗ ಮೇಳಗಳನ್ನು ಆಯೋಜಿಸಿ 3 ಲಕ್ಷಕ್ಕೂ ಹೆಚ್ಚು ಯುವಕ ಯುವತಿಯರಿಗೆ ಉದ್ಯೋಗವನ್ನು ದೊರಕಿಸಿ ಕೊಟ್ಟಿರುತ್ತಾರೆ.
ಹಾಗೂ ಬಡಜನರ ಆರೋಗ್ಯ ದೃಷ್ಟಿಯಿಂದ ಆರೋಗ್ಯಮೇಳ ರಕ್ತದಾನ ಶಿಬಿರ ಮತ್ತು ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ಬಡ ರೋಗಿಗಳಿಗೆ ದಾರಿದೀಪವಾಗಿದ್ದಾರೆ. ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಲ್ಲಿ ಇರುವಂತಹ ಖಾಲಿ ಹುದ್ದೆಗಳು ಕನ್ನಡಿಗರಿಗೆ ಸಿಗಬೇಕು ಕನ್ನಡಿಗನಿಂದ… ಕನ್ನಡಿಗರಿಗಾಗಿ… ಕನ್ನಡಿಗರಿಗೋಸ್ಕರ ಎಂಬ ದ್ಯೇಯದೊಂದಿಗೆ “ಕನ್ನಡ ನೌಕರಿ” ಎಂಬ ಸಂಸ್ಥೆಯ ಮೂಲಕ ಕನ್ನಡ ನಾಡಿನ ಯುವ ಜನತೆಗೆ ಉಚಿತ ಉದ್ಯೋಗದ ಮಾಹಿತಿಯನ್ನು ಕೊಡುತ್ತಿದ್ದಾರೆ. ಈ ಮೂಲಕ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಉದ್ಯೋಗಗಳ ಮಾಹಿತಿ ಉದ್ಯೋಗವನ್ನು ಹುಡುಕುತ್ತಿರುವಂತಹ ನಿರುದ್ಯೋಗಿ ಯುವ ಜನತೆಗೆ ಬಹಳ ಸರಳವಾಗಿ ತಲುಪಿಸುವಂತಹ ಕಾರ್ಯವನ್ನ ಮಾಡುತ್ತಿದ್ದಾರೆ.
ದೆಯೋದ್ದೇಶಗಳು
- ಸಮಾಜದ ಕಟ್ಟಕಡೆಯ ಎಲ್ಲಾ ಸಮುದಾಯದ ಪ್ರತಿ ಪ್ರಜೆಗೂ ಉತ್ತಮವಾದ ಶಿಕ್ಷಣದ ಜ್ಞಾನವನ್ನು ಹರಡುವುದರ ಮೂಲಕ ಜ್ಞಾನವಾಹಿನಿಯನ್ನು ಪಸರಿಸುವುದು
- ವ್ಯಕ್ತಿಗಳ ಕೌಶಲ ಹಾಗೂ ಸಾಮೂದಾಯಿಕ ಸಮಗ್ರತೆಯ ಕೌಶಲಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
- ಪ್ರತಿಯೊಬ್ಬ ನಾಗರೀಕರಿಗೂ ಕನಿಷ್ಠ ಜೀವನಾವಶ್ಯಕಗಳನ್ನು ಸಮರ್ಪಕವಾಗಿ ಪಡೆಯಲು ಅನುಕೂಲವಾಗುವಂತಹ ಕಾರ್ಯಕ್ರಮಗಳ ಅನುಸರಣೆ.
- ಉದ್ಯೋಗ ಮೇಳ ಆರೋಗ್ಯಮೇಳ ಹಾಗೂ ಹಲವಾರು ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಲವಾರು ಕೌಶಲ್ಯಭರಿತ ಯುವ ಸಮುದಾಯಕ್ಕೆ ಭವಿಷ್ಯ ಕಂಡುಕೊಳ್ಳುವಲ್ಲಿ ವೇದಿಕೆಯನ್ನು ಒದಗಿಸುವುದು.
